CROWD FUND

ನ್ಯಾಷನಲ್ ಅಕಾಡಮಿ ಆಫ್ ಸಿನಿಮಾ ಅಂಡ್ ಟೆಲಿವಿಷನ್ ಸಂಸ್ಥೆಯು ಜುಲೈ 09.2008 ರಂದು ಕರ್ನಾಟಕ ಸರ್ಕಾರದ ಅನುಮತಿಯೊಂದಿಗೆ ಸ್ಥಾಪಿಸಲ್ಪಟ್ಟ ಸಂಸ್ಥೆಯಾಗಿದ್ದು ಇದು ವಿಶ್ವಕಲಾ ಟ್ರಸ್ಟ್ ರವರ ಅಂಗ ಸಂಸ್ಥೆಯಾಗಿದೆ,ಈ ಸಂಸ್ಥೆಯು ನಿಜವಾಗಿ ಸಿನೆಮಾಸಕ್ತಿ ಉಳ್ಳವರಿಗಾಗಿ ಒಂದು ವಿಶೇಷಯೋಜನೆಯನ್ನು ಜಾರಿಗೆ ತಂದಿರುತ್ತದೆ ಅದುವೆ CROWD FUNDING THE EVERYMAN INVESTOR ಈ ಯೋಜನೆಯನ್ನು ಜಾರಿಗೆ ತಂದಿರುತ್ತದೆ.

ಬಹಳಷ್ಟು ಸಿನೆಮಾಸಕ್ತರಿಗೆ ಸಿನೆಮಾ ರಂಗವನ್ನು ಪ್ರವೇಶಮಾಡಬೇಕು ಮತ್ತು ಉತ್ತಮ ಚಲನಚಿತ್ರಗಳನ್ನು ನಿರ್ಮಿಸಲು ಆಸಕ್ತಿ ಇರುತ್ತದೆ, ಆದರೆ ಅವರಿಗೆ ಸರಿಯಾದ ಮಾರ್ಗ ಸೂಚನೆ ಕೊಡುವ ವರ್ಗ ನಮ್ಮ ಚಲನಚಿತ್ರ ಕ್ಷೇತ್ರದಲ್ಲಿ ಬಹಳ ಕಡಿಮೆ ಅಪರೂಪಕ್ಕೆ ಸಿಕ್ಕರು ಅವರಿಂದ ತುಂಬ ಪ್ರಮಾಣದ ನಷ್ಟ ಅನುಭವಿಸಿ ಕೊನೆಗೆ ಈ ಚಲನಚಿತ್ರ ಕ್ಷೇತ್ರ ಉತ್ತಮವಲ್ಲ ಎಂದು ಜರಿಯುತ್ತ ಕೂತವರು ಬಹಳಷ್ಟು ಮಂದಿ ಇದ್ದಾರೆ.

ಈ ಒಂದು ವಿಶೇಷ ಯೋಜನೆಯನ್ನು ಜಾರಿಗೆ ತರಲು ಹಲವಾರು ಮಹತ್ವದ ಕಾರಣಗಳಿವೆ ಅವುಗಳಲ್ಲಿ ಪ್ರಮುಖವಾದವುಗಳು

  • ಉತ್ತಮ ಕನ್ನಡ ಚಿತ್ರಗಳನ್ನ ನಿರ್ಮಿಸಲು
  • ಕರ್ನಾಟಕ ಕನ್ನಡ ಮತ್ತು ಸಂಸೃತಿಯನ್ನು ಪ್ರಪಂಚದಾದ್ಯಂತ ಪರಿಚಯಿಸುವುದಕ್ಕಾಗಿ
  • ಕಡಿಮೆ ಬಂಡವಾಳದಲ್ಲಿ ಉತ್ತಮ ಸಿನೆಮಾ ನಿರ್ಮಿಸುವುದಕ್ಕಾಗಿ
  • ಹೊಸ ಪ್ರತಿಭಾನ್ವಿತ ಪ್ರತಿಭೆಗಳನ್ನ ಬೆಳೆಸುವುದಕ್ಕಾಗಿ
  • ಹೊಸ ನಿರ್ಮಾಪಕ, ನಿರ್ದೇಶಕ, ನಟ, ನಟಿ ,ಸಿನೆಮಾ ತಾಂತ್ರಿಕ ವರ್ಗದವರನ್ನು ಚಲನಚಿತ್ರಕ್ಕೆ ಪರಿಚಯಿಸುವ ಸಲುವಾಗಿ
  • ಉತ್ತಮ ಪ್ರತಿಭೆ ಇದ್ದು ಅವಕಾಶವಂಚಿತರಾದವರಿಗೆ ಚಲನಚಿತ್ರ ಕ್ಷೇತ್ರದಲ್ಲಿ ಉತ್ತಮ ಅವಕಾಶ ಕಲ್ಪಿಸಿಕೊಡುವುದಕ್ಕಾಗಿ
  • ಚಲನಚಿತ್ರ ನಿರ್ದೇಶನದಲ್ಲಿ ಸಾಕಷ್ಟು ಅನುಭವ ಇರುವವರು ಆದರೆ ಸಿನೆಮಾ ನಿರ್ದೇಶನ ಮಾಡಲು ಇದುವರೆಗು ಅವಕಾಶವೇ ಸಿಗದಿರುವುದು ಅಂತವರನ್ನು ಗುರುತಿಸಿ ಸಿನೆಮಾ ನಿರ್ದೇಶನ ಮಾಡಲು ಉತ್ತಮ ಅವಕಾಶ ಕಲ್ಪಿಸಿಕೊಡುವುದಕ್ಕಾಗಿ
  • ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಹಲವರಿಗೆ ಉದ್ಯೋಗ ಕಲ್ಪಿಸಿಕೊಡಲು
  • ಕನ್ನಡ ಚಲನಚಿತ್ರಗಳನ್ನ ಪ್ರಪಂಚದ್ಯಾದ್ಯಂತ ವಿತರಣೆಮಾಡುವುದಕ್ಕಾಗಿ
  • ಪರಭಾಷಾ ಚಿತ್ರಗಳೊಂದಿಗೆ ಉತ್ತಮ ಗುಣಮಟ್ಟದ ಸಿನೆಮಾ ನಿರ್ಮಿಸಿ ಸ್ಪರ್ದಿಸುವುದಕ್ಕಾಗಿ
  • ಕನ್ನಡ ಭಾಷಾ ಚಲನಚಿತ್ರಗಳನ್ನ ಭಾರತಿಯ ಎಲ್ಲಾ ಭಾಷಾ ಚಲನಚಿತ್ರಗಳಿಗೆ ಡಬ್ ಮಾಡಿ ಪ್ರಪಂಚದ್ಯಾದ್ಯಂತ ಚಲನ ಚಿತ್ರಗಳನ್ನ ಬಿಡುಗಡೆ ಮಾಡಿ ಕನ್ನಡ ಸಂಸ್ಕೃತಿ ಕಲೆ ಜೀವನಕ್ರಮಗಳನ್ನ ಪರಿಚಯಿಸುವುದಕ್ಕಾಗಿ
  • ತಿಂಗಳಲ್ಲಿ 4 ರಿಂದ 7 ಜನ ಎನ್ ಎ ಸಿ ಟಿ ಸಂಸ್ಥೆಗೆ ಬಂದು - ನನ್ನ ಬಳಿಸ್ವಲ್ಪ ಪ್ರಮಾಣದ ಹಣವಿದೆ ನಾನು ಸಿನೆಮಾ ನಿರ್ಮಾಣ ಮಾಡಬೇಕು ಹಾಗು ಚಲನಚಿತ್ರ ಕ್ಷೇತ್ರದಲ್ಲಿ ಸೇವೆ ಸಲ್ಲಿಸ ಬೇಕು ಎಂಬ ಮಹತ್ವಕಾಂಕ್ಷೇಯ ಆಶೆ ಇಟ್ಟುಕೊಂಡಿರುವ ಸಣ್ಣ ಹಣಕಾಸು ಹೂಡಿಕೆದಾರರಿಗಾಗಿ.
  • ಸಾಕಷ್ಟು ಹಣ ಉಳ್ಳವರು ಆದರೆ ಸಿನೆಮಾ ನಿರ್ಮಾಣ ಮಾಡಲು ಸಾಕಷ್ಟು ತಿಳುವಳಿಕೆ ಇಲ್ಲದವರು ಇವರಿಗೆ ಸಾಕಷ್ಟು ತಿಳುವಳಿಕೆ ಕೊಟ್ಟು ಉತ್ತಮ ಸಿನೆಮಾ ನಿರ್ಮಿಸುವುದಕ್ಕಾಗಿ
  • ಭಾರತಿಯ ಎಲ್ಲ ಬಗೆಯ ಭಾಷೆಯ ಚಲನಚಿತ್ರ ನಿರ್ಮಿಸಲು
  • ಉತ್ತಮ ಗುಣಮಟ್ಟದ ಸಿನೆಮಾ ನಿರ್ಮಿಸುವುದಕ್ಕಾಗಿ
  • ಹೊಸ ರೀತಿಯ ಹಾಗು ಉತ್ತಮ ಸಿನೆಮಾ ಅಭಿರುಚಿ ಉಳ್ಳವರಿಗಾಗಿ
  • ಹೊಸ ರೀತಿಯ ವಿಭಿನ್ನ ಬಗೆಯ ಹೊಸ ಪ್ರಯೋಗಾತ್ಮಕ ಚಿತ್ರ ಮಾಡಲಿಚ್ಚಿಸುವವರಿಗಾಗಿ
  • ಹೊಸ ತಾಂತ್ರೀಕತೆಯ ಅತ್ಯಾಧುನಿಕ ತಾಂತ್ರೀಕತೆಯ ತಿಳುವಳಿಕೆ ಉಳ್ಳವರಿಗಾಗಿ.
  • ಕಲಾತ್ಮಕ ಮತ್ತು ವಾಣಿಜ್ಯ ಸಿನೆಮಾಗಳನ್ನ ನಿರ್ಮಿಸಿವುದಕ್ಕಾಗಿ
  • ಈ ಸಂಸ್ಥೆಯು ಉತ್ತಮ ಸಿನೆಮಾಸಕ್ತರಿಗೆ ಸಿನೆಮಾ ನಿರ್ಮಿಸುವುದಕ್ಕಾಗಿ ಮಾತ್ರ

ಇಂದು ಭಾರತೀಯ ಚಿತ್ರರಂಗ ಅಂತರರಾಷ್ಟ್ರೀಯ ಮಟ್ಟದ ಮಾರುಕಟ್ಟೆಯನ್ನು ಹೊಂದಿದೆ ಜೊತೆಗೆ ಎಲ್ಲ ದೇಶಗಳಲ್ಲೂ ಭಾರತೀಯ ಸಿನೆಮಾಗಳು ಬಿಡುಗಡೆ ಗೊಳ್ಳುತ್ತಿವೆ ಹಾಗು ಅಪಾರ ಪ್ರಮಾಣದ ಲಾಭಗಳಿಸುತ್ತಿವೆ, ಭಾರತೀಯ ಸಿನೆಮಾ ಮಾರುಕಟ್ಟೆಯನ್ನು ಗಮನಿಸಿದ ವಿದೇಶಿ ಹೆಸರಾಂತ ಸಿನೆಮಾ ಕಂಪನಿಗಳು ಇಂದು ಭಾರತೀಯರ ಭಾರತ ಭಾಷೆಯ ಸಿನೆಮಾ ನಿರ್ಮಾಣ ಮಾಡುತ್ತಿವೆ, ಇದನ್ನೆಲ್ಲ ಗಮನಿಸಿದಾಗ ಭಾರತೀಯ ಚಿತ್ರರಂಗದ ಚಲನಚಿತ್ರಗಳು ತುಂಬ ಲಾಭ ಹಾಗು ಹೆಸರು ತಂದು ಕೊಡುವ ಕ್ಷೇತ್ರವೆಂದು ತಿಳಿದು ಬರುತ್ತದೆ. ಚಲನಚಿತ್ರ ನಿರ್ಮಾಣ ಈಗ ಅತ್ಯಂತ ಆಧುನಿಕವಾದ ಹೊಸತನಗಳ ಅಳವಡಿಕೆಗಳಿಂದ ಕೂಡಿದೆ ಡಿಜಿಟಲ್ ತಂತ್ರಜ್ಞಾನದಲ್ಲಿ ಸಿನೆಮಾ ನಿರ್ಮಾಣ ಬಹಳ ಸುಲಭವಾಗಿದೆ ಅಂದರೆ ಆ ಆಧುನಿಕತೆಯ ತಂತ್ರಜ್ಞಾನ ತಿಳಿದವರಿಗೆ ಮಾತ್ರ

ತಾಂತ್ರೀಕತೆ ಮತ್ತು ಸಿಬ್ಬಂದಿ

ಎನ್ ಎ ಸಿ ಟಿ ಸಂಸ್ಥೆಯು ಸಿನೆಮಾ ಹಾಗು ಟಿವಿಗೆ ಸಂಬಂದಿಸಿದಂತೆ ತಾಂತ್ರೀಕ ತರಬೇತಿ ನೀಡುವುದರ ಜೊತೆಗೆ ಚಲನಚಿತ್ರ ಹಾಗು ಟಿವಿ ಮಾದ್ಯಮ ಕ್ಷೇತ್ರಗಳಲ್ಲಿ ಉತ್ತಮ ಗುಣಮಟ್ಟದ ಸ್ನೇಹ ಸಂಬಂಧವನ್ನು ಹೊಂದಿದ್ದು ಉತ್ತಮ ಚಲನಚಿತ್ರಗಳ ನಿರ್ಮಾಣ ಹಾಗು ಟಿವಿ ಕಾರ್ಯಕ್ರಮಗಳ ನಿರ್ಮಾಣ ನಿರ್ದೇಶನ ಮಾಡಲು ಅತ್ಯುತ್ತಮ ನುರಿತ ತಾಂತ್ರೀಕ ವರ್ಗವನ್ನು ಹೊಂದಿದೆ ಜೊತೆಗೆ ಸಿನೆಮಾ ಶೊಟಿಂಗಿಗೆ ಬೇಕಾದ ಆಧುನಿಕ ತಾಂತ್ರೀಕತೆಯ ಉತ್ತಮ ರೀತಿಯ ಕ್ಯಾಮೆರಗಳನ್ನು (ಡಿಜಿಟಲ್ ಸಿನೆಮಾ ಕ್ಯಾಮೆರಗಳು 4k ), ಉತ್ತಮ ಲೈಟ್ಸ್ಗಳನ್ನು, ಎಡಿಟಿಂಗ್ ಸ್ಟೂಡಿಯೋ, ಡಬ್ಬಿಂಗ್ ಸ್ಟೂಡಿಯೋ, ಕಲರ್ ಗ್ರೇಡಿಂಗ್ ಸ್ಟೂಡಿಯೋ ಹಾಗು ಸಿನೆಮಾ ವಿಕ್ಷಣೆಯ ಚಿತ್ರಮಂದಿರವನ್ನು ಹೊಂದಿರುತ್ತದೆ, ಜೊತೆಗೆ ಉತ್ತಮ ಆಡಳಿತ ವರ್ಗದ ಸಿಬ್ಬಂದಿಗಳನ್ನು, ಕಾನೂನು ಸಲಹೆಗಾರರನ್ನು, ಸಿನೆಮಾ ವಿತರಕ ವರ್ಗವನ್ನು ಹಾಗು ಸಂಸ್ಥೆಯ ಲೆಕ್ಕ ಪರಿಶೀಲಿಸಲು ಚಾರ್ಟರ್ಡ್ ಅಕೌಂಟೆಂಟ್ ಅವರನ್ನು ಹಾಗು CROWD FUNDING THE EVERYMAN INVESTOR ಈ ವಿಭಾಗಕ್ಕೆ ಅತ್ಯತ್ತಮ ನುರಿತ ಹಾಗು ಅನುಭವಿಗಳ ಸದಸ್ಯತ್ವ ಕಮೀಟಿಯನ್ನು ಹೊಂದಿರುತ್ತದೆ

ಈ ಕಾರ್ಯಕ್ರಮವು ಕಾನೂನು ಬದ್ದವಾಗಿರುತ್ತದೆ ಹಾಗು ನೀತಿ ನಿಯಮಗಳಿಗೆ ಒಳಪಟ್ಟಿರದ್ದಾಗಿರುತ್ತದೆ, ಹಲವು ಜನರ ಸಣ್ಣ ಸಣ್ಣ ಬಂಡವಾಳಗಾರರ ಹೂಡಿಕೆಯ ಕಾರ್ಯಕ್ರಮ ವಾಗಿರುತ್ತದೆ

ನೀತಿ ನಿಯಮಗಳು

  • Crowd Funding The Everyman Investor ಸಂಸ್ಥೆಗೆ ಹಣ ಹೂಡಿಕೆಮಾಡುವ ವ್ಯಕ್ತಿಗಳು ಭಾರತಿಯ ಮತ್ತು ಅನಿವಾಸಿ ಭಾರತಿಯರು ಮಾತ್ರ ಆಗಿರಬೇಕು.
  • ಹಣವನ್ನು ಹೂಡಿಕೆ ಮಾಡಿವ ಪುರುಷ ಮತ್ತು ಮಹಿಳೆಯರ ವಯಸ್ಸು 18 ವರ್ಷಗಳು ತುಂಬಿರಬೇಕು.
  • Crowd Funding The Everyman Investor ಇದು ಕೇವಲ ಸಿನೆಮಾ ನಿರ್ಮಾಣ ಮಾಡಲು ಮಾಡಿರುವ ಸಂಸ್ಥೆ ಆಗಿರುತ್ತದೆ.
  • ಯಾರು Crowd Funding The Everyman Investor ಸಿನೆಮಾ ನಿರ್ಮಾಣಕ್ಕೆ ಹಣವನ್ನು ಇನ್ವೇಸ್ಟ್ ಮಾಡಿರುತ್ತಾರೋ ಅವರೆಲ್ಲರೂ ಕೂಡ ನಿರ್ಮಾಪಕರಾಗಿರುತ್ತಾರೆ.
  • CROWD FUNDING THE EVERYMAN INVESTOR ಗೆ ಹಣವನ್ನು ಹೂಡಿಕೆ ಮಾಡುವ ವ್ಯಕ್ತಿಗಳು 1 ವರುಷಗಳು ತನಕ ಹೂಡಿಕೆ ಹಣವು ವಾಪಸ್ಸು ಬರುವ ತನಕ ಕಾಯುವ ತಾಳ್ಮೆ ಸಹನೆಗುಣಗಳು ಇರುವಂತವರು ಮಾತ್ರ ಈ ಯೋಜನೆಗೆ ಹಣವನ್ನು ಹೂಡಿಕೆ ಮಾಡಬೇಕು.
  • ಸಿನೆಮಾ ನಿರ್ಮಿಸಿ ಬಿಡುಗಡೆ ಮಾಡಿ ಬಂದ ಅಸಲು ಮತ್ತು ಲಾಭವನ್ನು ಎಲ್ಲಾ ಹೂಡಿಕೆದಾರರಿಗೂ ಅವರ ಅಸಲಿಗೆ ತಕ್ಕಂತೆ ಹಂಚಲಾಗುವುದು ಹಾಗೂ ನಿರಂತರ ಮೂರು ವರುಷಗಳು ತನಕ ಬರುವ ರಾಜ್ಯ ರಾಷ್ಟ್ರ ಅಂತರರಾಷ್ಟ್ರೀಯ ಆಸ್ಕರ್ ಚಲನಚಿತ್ರೋತ್ಸದಲ್ಲಿ ಸ್ಪರ್ದಿಸಿ ಬರುವ (ಪ್ರಶಸ್ತಿ ಬಂದರೆ..?) ಹಣವನ್ನು ಕೂಡ ಹೂಡಿಕೆದಾರರ ಅಸಲಿಗೆ ತಕ್ಕಂತೆ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಹಿಸಲಾಗುವುದು
  • ಹೂಡಿಕೆ ಮಾಡಿರುವ ಹಣದಲ್ಲಿ ಶೇ 50% ಚಿತ್ರೀಕರಣಕ್ಕೆ ಬಳಸಿ ಉಳಿಕೆ ಶೇ 50% ಹಣವನ್ನು ಸಿನೆಮಾ ಬಿಡುಗಡೆ ಹಾಗು ಪ್ರಚಾರಕ್ಕೆ ಬಳಸಲಾಗುವುದು
  • ಈ ಹೂಡಿಕೆಯಿಂದ ನಿರ್ಮಿಸುವ ಚಲನಚಿತ್ರವನ್ನು ಯಾವುದೇ ಕಾರಣಕ್ಕೂ ನಷ್ಟ ಹೊಂದದ ರೀತಿಯಲ್ಲಿ ಸಿನೆಮಾವನ್ನು ನಿರ್ಮಿಸಿ ಖಂಡಿತವಾಗಿ ಲಾಭ ಬರಲೆಬೇಕು ಆ ರೀತಿ ಸಿನೆಮಾವನ್ನು ನಿರ್ಮಿಸಿ ಬಿಡುಗಡೆಮಾಡಿ ಹಾಗು ಟಿವಿ ರೈಟ್ಸ್‍ಗೆ ಮಾರಾಟ ಮಾಡಲಾಗುವುದು
  • ಚಲನಚಿತ್ರವನ್ನು ಚಿತ್ರೀಕರಿಸುವ ಮೊದಲು ಅನೇಕಾರು ರೀತಿಯ ಸಿನೆಮಾ ಸರ್ವೆಯನ್ನು ಮಾಡಲಾಗುವುದು ಅಂದರೆ ಜನರು ಯಾವ ರೀತಿಯ ಸಿನೆಮಾ ನೋಡಲು ಇಚ್ಚಿಸುತ್ತಾರೆ ಹಾಗು ಯಾವ ರೀತಿಯ ಸಿನೆಮಾಗಳು ಇತ್ತೀಚಿನ ದಿನಗಳಲ್ಲಿ ಯಶಸ್ವಿಗೊಂಡಿವೆ ಮತ್ತು ಯಾವ ರೀತಿಯ ಕಥೆ ಬೇಕು ಎಂಬುಹುದನ್ನ ಸರ್ವೆಮಾಡಿ ನಂತರ ಚಲನಚಿತ್ರವನ್ನು ನಿರ್ಮಿಸಲಾಗುವುದು
  • ಈ ಯೋಜನೆಯಲ್ಲಿ ಉತ್ತಮ ಸದಾಭಿರುಚಿಯ ಕೌಟಿಂಭಿಕ ಮನರಂಜನೆಯ ಸಿನೆಮಾಗಳನ್ನ ನಿರ್ಮಿಸಲಾಗುವುದು ಜೊತೆಗೆ ಉತ್ತಮ ಕಲಾತ್ಮಕ ಚಿತ್ರಗಳನ್ನು ಮತ್ತು ಮಕ್ಕಳ ಚಲನಚಿತ್ರಗಳನ್ನು ಕೂಡ ನಿರ್ಮಿಸಲಾಗುವುದು.
  • ಹಣವನ್ನು ಹೂಡಿಕೆ ಮಾಡಿವ ಪ್ರತಿಯೊಬ್ಬರು ಅವರ ಹೆಸರಿರುವ ವಿಳಾಸ, ಪ್ಯಾನ್ ಕಾರ್ಡ್ ಅನ್ನು ಜೆರಾಕ್ಸ್ ಪ್ರತಿಯನ್ನು ಲಗ್ಗತಿಸಿ ಸಂಸ್ಥೆಗೆ ತಲುಪಿಸಬೇಕು, ಹೊರದೇಶದವರಾದರೆ ಸಾಫ್ಟ್ ಕಾಪಿಗಳನ್ನು ಕಳಿಸಬೇಕು.
  • ಅಪ್ಲಿಕೇಷನ್‍ಗಳು ಸಂಸ್ಥೆಯ ವೆಬ್ ಸೈಟ್‍ನಲ್ಲಿದೊರೆಯುತ್ತದೆ, ಅಪ್ಲಿಕೇಷನ್‍ಗಳನ್ನು ಡೌನ್‍ಲೋಡ್ ಮಾಡಿಕೊಂಡು ಪರಿಪೂರ್ಣವಾಗಿ ಓದಿ ಭರ್ತಿಮಾಡಿದ ಪ್ರತಿಯನ್ನು ಸಂಸ್ಥೆಯ ವಿಳಾಸಕ್ಕೆ ಕಳಿಸಬೇಕು ಅಥವ ಸಾಫ್ಟ್ ಕಾಪಿಯನ್ನು ಭರ್ತಿಮಾಡಿದ ಪ್ರತಿಯನ್ನು ಸಂಸ್ಥೆಯ ಇಮೇಲ್ ವಿಳಾಸಕ್ಕೆ ಕಳಿಸಬೇಕು.
  • ಹೂಡಿಕೆ ಮಾಡಿದ ಹಣವನ್ನು ಸಂಪೂರ್ಣವಾಗಿ ಸಿನೆಮಾ ನಿರ್ಮಾಣ ಹಾಗು ಸಿನೆಮಾ ಬಿಡುಗಡೆಗೆ ಮಾತ್ರ ಉಪಯೊಗಿಸಲಾಗುವುದು
  • ಹಣವನ್ನು ಹೂಡಿಕೆ ಮಾಡಿವ ವ್ಯಕ್ತಿಗಳು ತಾವುಗಳು ಹೊಂದಿರುವ ಬ್ಯಾಂಕ್ ಹಾಗು ಶಾಖೆಯ ಹೆಸರು, ಅಕೌಂಟ್ ನಂಬರ್, ಐ ಎಫ್ ಸಿ ಕೋಡ್ ನಂಬರ್, ಪ್ಯಾನ್ ನಂಬರ್ ಗಳನ್ನು ನಮೂದಿಸಬೇಕು
  • CROWD FUNDING THE EVERYMAN INVESTOR ನಲ್ಲಿ ವ್ಯವಹರಿಸುವ ಎಲ್ಲಾ ವ್ಯವಹಾರಗಳು ಸಂಪೂರ್ಣ ಶ್ವೇತವರ್ಣವಾಗಿರುತ್ತದೆ (Transparent) ಹಾಗು ಎಲ್ಲಾ ವ್ಯವಹಾರಗಳು ಬ್ಯಾಂಕ್ ಮತ್ತು ಚೆಕ್ ವ್ಯವಹಾರಗಳಿಂದ ಕೂಡಿರುತ್ತದೆ
  • ಹಣವನ್ನು ಹೂಡಿಕೆ ಮಾಡಿವ ಪ್ರತಿ ವ್ಯಕ್ತಿಗಳಿಗೂ ಹೂಡಿಕೆಯ ದಾಖಲಾತಿ ಪ್ರತಿಗಳನ್ನ ನೀಡಲಾಗುವುದು (ವರ್ಗಾಹಿಸುವಂತಿಲ್ಲ)
  • ಹೂಡಿಕೆ ಮಾಡಿದ ಹಣದಲ್ಲಿ ಸಿನೆಮಾ ನಿರ್ಮಾಣಮಾಡಿ ಹಾಗು ಸಿನೆಮಾ ಬಿಡುಗಡೆಮಾಡಿ, ಸಿನೆಮಾದಿಂದ ಬಂದ ಲಾಭದಿಂದ ಮೊದಲು ಹೂಡಿಕೆಮಾಡಿರುವ ವ್ಯಕ್ತಿಗಳ ಬಂಡವಾಳವನ್ನು ವಾಪಸ್ಸು ಮಾಡಲಾಗುವುದು
  • ಕನ್ನಡದಲ್ಲಿ ನಿರ್ಮಿಸಿದ ಚಲನಚಿತ್ರವನ್ನು ಇತರೆ ಭಾಷೆಗಳಿಗೂ ಡಬ್ಬ್ ಮಾಡಿ ಬಿಡುಗಡೆಮಾಡಿ ಬಂದ ಲಾಭಾಂಶವನ್ನು ಎಲ್ಲಾ ಹೂಡಿಕೆದಾರರಿಗೂ ಅವರು ಹೂಡಿರುವ ಅಸಲಿಗೆ ತಕ್ಕಂತೆ ಹಂಚಿಕೆ ಮಾಡಲಾಗುವುದು
  • ಸಿನೆಮಾದಿಂದ ಬಂದ ಲಾಭದಿಂದ ಹೂಡಿಕೆದಾರರಿಗೆ ಅಸಲನ್ನು ವಾಪಸ್ಸು ಮಾಡಿ, ನಂತರ ಮುಂದಿನ ಸಿನೆಮಾ ನಿರ್ಮಾಣಮಾಡುವಷ್ಟು ಹಣವನ್ನು ಉಳಿಸಿ ಕೊಂಡು ಉಳಿಕೆ ಲಾಭಾಂಶ ಹಣವನ್ನು ಹೊಡಿಕೆದಾರರ ಮೂಲ ಬಂಡವಾಳದ ಅಸಲಿಗೆ ತಕ್ಕಂತೆ ಲಾಭಾಂಶವನ್ನು ಹಂಚಲಾಗುವುದು
  • CROWD FUNDING THE EVERYMAN INVESTOR ನಲ್ಲಿ ಹಣವನ್ನು ಹೂಡಿಕೆಮಾಡುವ ವ್ಯಕ್ತಿಗಳ ಗುಣಗಳು ಉತ್ತಮವಾಗಿರಬೇಕು ಕೆಟ ್ಟ(ಸಮಾಜ ಘಾತುಕ) ವ್ಯಕ್ತಿಗಳು ಎಂದುಕಂಡಬಂದಲ್ಲಿ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಅವರು ಹೂಡಿರುವ ಹೂಡಿಕೆಯ ಹಣವನ್ನು ಅವರ ಬ್ಯಾಂಕ್ ಖಾತೆಗೆ ತಕ್ಷಣ ವರ್ಗಾಹಿಸಲಾಗುವುದು (ವಾಪಸ್ಸುಮಾಡಲಾಗುವುದು)
  • CROWD FUNDING THE EVERYMAN INVESTOR ನಲ್ಲಿ ಹಣವನ್ನು ಹೂಡಿಕೆಮಾಡುವ ವ್ಯಕ್ತಿಗಳ ಹಣವನ್ನು ಯಾವುದೇ ಕಾರಣಕ್ಕೂ ಒಂದು ವರ್ಷಗಳತನಕ ಹಿಂದಿರುಗಿಸಲಾಗುವುದಿಲ್ಲ (ವಾಪಸ್ಸು ಮಾಡಲಾಗುವುದಿಲ್ಲ ) ಸಿನೆಮಾ ಪ್ರಾಜೇಕ್ಟ್ ಮುಗಿದ ನಂತರ ವಾಪಸ್ಸು ಮಾಡಲಾಗುವುದು
  • ಸಿನೆಮಾ ನಿರ್ಮಿಸುತ್ತಿರುವ ಸಮಯದಲ್ಲಿ ಹೂಡಿಕೆಮಾಡಿರುವ ಯಾವುದೇ ವ್ಯಕ್ತಿಯು ಸಿನೆಮಾ ತಂತ್ರರಿಗೆ ಹಾಗು ನಟ ನಟಿಯರಿಗೆ ಮಾನಸಿಕವಾಗಿ ಹಾಗು ದೈಹಿಕವಾಗಿ ಯಾವುದೆ ತೊಂದರೆ ಕೊಡಬಾರದು ಆ ರೀತಿ ತೊಂದರೆ ಕೊಟ್ಟಲ್ಲಿ ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗುವುದು

ಹೂಡಿಕೆ ಮಾಡುವ ವ್ಯಕ್ತಿಗಳಿಗೆ ದೊರೆಯುವ ಲಾಭಾಂಶಗಳು

  • ಕನ್ನಡ ಸಿನೆಮಾ ನಿರ್ಮಿಸುವ ಸುವರ್ಣವಕಾಶ Crowd Funding The Everyman Investor ಮೂಲಕ ಸಣ್ಣ ಸಣ್ಣ ಹೂಡಿಕೆದಾರರಿಗೆ ಸಿನೆಮಾ ನಿರ್ಮಾಪಕ ಎಂಬ ಹೆಸರು ಬರುತ್ತದೆ ಮತ್ತು ಕನ್ನಡ ಚಲನಚಿತ್ರರಂಗದ ಪ್ರವೇಶಕ್ಕೆ ಸುಲಭಮಾರ್ಗಮಾಡಿಕೊಡುತ್ತದೆ.
  • CROWD FUNDING THE EVERYMAN INVESTOR ಮೂಲಕ ಸಿನೆಮಾ ನಿರ್ಮಿಸುವ ಪ್ರತಿ ನಿರ್ಮಾಪಕರಿಗೂ ಕನ್ನಡ ಚಲನಚಿತ್ರವನ್ನು ನಿರ್ಮಿಸಿ ಕನ್ನಡ ಚಲನಚಿತ್ರವನ್ನು ಬಿಡುಗಡೆಮಾಡಿ ಚಿತ್ರದಿಂದ ಬರುವ ಲಾಭದಲ್ಲಿ ಸಣ್ಣ ಸಣ್ಣ ಹೂಡಿಕೆದಾರರು ಹೂಡಿರುವ ಅಸಲಿಗೆ ತಕ್ಕಂತೆ ಲಾಭಾಂಶವನ್ನು ನೀಡಲಾಗುವುದು
  • ಸಿನೆಮಾದಿಂದ ಬಂದ ಲಾಭದಲ್ಲಿ ಮೊದಲಿಗೆ ಹೂಡಿಕೆ ಮಾಡಿರುವ ಪ್ರತಿಯೊಬ್ಬ ಹೂಡಿಕೆದಾರರಿಗೂ ಅಸಲು ಬಂಡವಾಳವನ್ನು ಹಿಂದಿರುಗಿಸಲಾಗುವುದು (ವಾಪಸ್ಸು ಮಾಡಲಾಗುವುದು)
  • CROWD FUNDING THE EVERYMAN INVESTOR ಮೂಲಕ ನಿರ್ಮಿಸಿದ ಚಲನಚಿತ್ರವನ್ನು ಟಿವಿ ರೈಟ್ಸ್‍ಗೆ ಮಾರಾಟ ಮಾಡಲಾಗುವುದು, ಮಾರಾಟದಿಂದ ಬರುವ ಹಣವನ್ನು ಹೂಡಿಕೆದಾರರ ಬಂಡವಾಳಕ್ಕೆ ತಕ್ಕಂತೆ ಹಣವನ್ನು ಹಂಚಲಾಗುವುದು
  • CROWD FUNDING THE EVERYMAN INVESTOR ಮೂಲಕ ನಿರ್ಮಿಸಿದ ಕನ್ನಡ ಚಲನಚಿತ್ರವನ್ನು ಭಾರತದ ಎಲ್ಲಾ ಭಾಷೆಗಳಿಗೂ ಡಬ್ಬ್ ಮಾಡಲಾಗುವುದು ಉದಾ: ಓಡಿಸಿ, ಗುಜರಾತಿ, ಹಿಂದಿ, ಅಸ್ಸಾಮಿ, ಬೆಂಗಾಲಿ, ಮಣಿಪುರಿ, ಕೊಂಕಣಿ, ನೇಪಾಳಿ, ಮರಾಠಿ, ತುಳು, ತಮಿಳು ,ತೆಲುಗು, ಮಳಯಾಳಂ, ಇಂಗ್ಲಿಷ್, ಚೈನೀಸ್ ಹಾಗೂ ಇತರ ಭಾಷೆಗಳಿಗೆ ಡಬ್ಬ್ ಮಾಡಲಾಗುವುದು
  • ಕನ್ನಡ ಚಲನಚಿತ್ರವನ್ನು ಇತರೆ ಭಾಷೆಗಳಿಗೆ ಡಬ್ಬ್ ಮಾಡಲಾಗುವುದು, ಡಬ್ಬ್ ಮಾಡಿದ ಚಲನಚಿತ್ರಗಳನ್ನು ಆಯಾ ಭಾಷೆಗಳ ಚಲನಚಿತ್ರ ವಿತರಕರಿಗೆ ಮಾರಾಟಮಾಡಲಾಗುವುದು ಬಂದ ಲಾಭವನ್ನು ಮೂಲ ಹೂಡಿಕೆದಾರರ ಅಸಲಿಗೆ ತಕ್ಕಂತೆ ಲಾಭಾಂಶವನ್ನು ಹಂಚಲಾಗುವುದು
  • ಇತರೆ ಭಾಷೆಗಳಿಗೆ ಡಬ್ಬ್ ಮಾಡಿದ ಚಲನಚಿತ್ರವನ್ನು ಆಯಾ ಭಾಷೆಯ ಟಿವಿ ರೈಟ್ಸ್ಗೆ ಮಾರಾಟ ಮಾಡಲಾಗುವುದು, ಮಾರಾಟದಿಂದ ಬರುವ ಹಣವನ್ನು ಹೂಡಿಕೆದಾರರ ಬಂಡವಾಳಕ್ಕೆ ತಕ್ಕಂತೆ ಹಣವನ್ನು ಹಂಚಲಾಗುವುದು
  • ಕನ್ನಡ ಹಾಗು ಇತರೆ ಭಾಷೆಗಳ ಆಡಿಯೋ (ದ್ವನಿ ಸುರಳಿ) ಮಾರಾಟದಿಂದ ಬರುವ ಲಾಭವನ್ನು ಹೂಡಿಕೆದಾರರ ಬಂಡವಾಳಕ್ಕೆ ತಕ್ಕಂತೆ ಹಣವನ್ನು ಹಂಚಲಾಗುವುದು
  • ಚಲನಚಿತ್ರದ ಹಾಡುಗಳ ಮತ್ತು ಸಂಗೀತದ ರಿಂಗ್ ಟೋನ್‍ಗಳಿಂದ ಬರುವ ಲಾಭವನ್ನು ಹೂಡಿಕೆದಾರರ ಬಂಡವಾಳಕ್ಕೆ ತಕ್ಕಂತೆ ಹಣವನ್ನು ಹಂಚಲಾಗುವುದು
  • CROWD FUNDING THE EVERYMAN INVESTOR ಮೂಲಕ ನಿರ್ಮಿಸಿದ ಚಲನಚಿತ್ರವನ್ನು ರಾಜ್ಯ, ರಾಷ್ಟ್ರ, ಪನೋರಮ ಮತ್ತು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಕಳಿಸಲಾಗುವುದು ಈ ಸ್ಪರ್ಧೆಯಲ್ಲಿ ಪ್ರಶಸ್ತಿಏನಾದರು ಬಂದಲ್ಲಿ ಹಾಗು ಆ ಪ್ರಶಸ್ತಿಯು ಹಣದ ರೂಪದಲ್ಲಿ ಬಂದರೆ ಹಣವನ್ನು ಹೂಡಿಕೆದಾರರ ಬಂಡವಾಳಕ್ಕೆ ತಕ್ಕಂತೆ ಹಂಚಲಾಗುವುದು
  • ಪ್ರಪಂಚದಾದ್ಯಂತ 7600 ಚಲನಚಿತ್ರಗಳ ಚಿತ್ರೋತ್ಸಗಳು ಆಚರಣೆಗೊಳ್ಳುತ್ತವೆ ಈ ಚಲನಚಿತ್ರಗಳ ಉತ್ಸವದಲ್ಲಿ ಈ ನಮ್ಮ ಚಲನಚಿತ್ರಗಳನ್ನು ಸ್ಪರ್ಧೆಗೆ ಕಳಿಸಲಾಗುವುದು ಈ ಸ್ಪರ್ಧೆಯಲ್ಲಿ ಪ್ರಶಸ್ತಿಏನಾದರು ಬಂದಲ್ಲಿ ಹಾಗು ಆ ಪ್ರಶಸ್ತಿಯು ಹಣದ ರೂಪದಲ್ಲಿ ಬಂದರೆ ಹೂಡಿಕೆದಾರರ ಬಂಡವಾಳಕ್ಕೆ ತಕ್ಕಂತೆ ಹಣವನ್ನು ಹಂಚಲಾಗುವುದು
  • ಸಿನೆಮಾದಿಂದ ಬಂದ ಲಾಭದಲ್ಲಿ ಮೊದಲು ಮುಂದಿನ ಚಲನಚಿತ್ರವನ್ನು ನಿರ್ಮಿಸುವಷ್ಟು ಹಣವನ್ನು ತೆಗೆದಿಟ್ಟು ಉಳಿಕೆ ಹಣದಲ್ಲಿ ಹೂಡಿಕೆದಾರರ ಬಂಡವಾಳಕ್ಕೆ ತಕ್ಕಂತೆ ಹಣವನ್ನು ಹಂಚಲಾಗುವುದು

ಬನ್ನಿ ನಮ್ಮೊಂದಿಗೆ ಕೈಜೊಡಿಸಿ ಸಿನೆಮಾ ಕ್ಷೇತ್ರ ಹಾಗು ಟಿವಿ ಕ್ಷೇತ್ರದ ಪ್ರಗತಿಗೆ ಹೊಸ ಮುನ್ನುಡಿ ಬರೆಯೊಣ

ಸದಾ ನಿಮ್ಮೊಂದಿಗೆ

ವಿಶ್ವಕಲಾ ಟ್ರಸ್ಟ್

ನ್ಯಾಷನಲ್ ಅಕಾಡಮಿ ಆಫ್ ಸಿನೆಮಾ ಅಂಡ್ ಟೆಲಿವಿಷನ್

CROWD FUNDING THE EVERYMAN INVESTOR

Download Crowd Fund Application